
ಆಳಂದ: ಜನರು ಹಾಗೂ ವಾಹನ ಸವಾರರನ್ನು ಬೆದರಿಸಿ ದರೋಡೆಗೆಆಳಂದದಲ್ಲಿ ದರೋಡೆಗೆ ಹೊಂಚು ಹಾಕಿದ್ದ ಐವರ ಹೊಂಚು ಹಾಕಿದ್ದ ಐವರು ಸಶಸ್ತ್ರ ದುಷ್ಕರ್ಮಿಗಳ ಗ್ಯಾಂಗ್ ಮೇಲೆ ಪೆÇಲೀಸರು ಹಾಗೂ ಗ್ರಾಮಸ್ಥರು ಕಾರ್ಯಾಚರಣೆ ನಡೆಸಿ, ಇಬ್ಬರನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ. ಈ ವೇಳೆ ಗ್ಯಾಂಗ್‍ನ ಓರ್ವ ಸದಸ್ಯ ಪಿಸ್ತೂಲ್‍ನಿಂದ ಎರಡು ಸುತ್ತು ಗುಂಡು ಹಾರಿಸಿ ಬೆದರಿಕೆ ಹಾಕಿದ್ದು, ಮೂವರು ಕಬ್ಬಿನ ಹೊಲದತ್ತ ಪರಾರಿಯಾಗಿದ್ದಾರೆ.
ಸೋಮವಾರ ಮಧ್ಯಾಹ್ನ 1.30ರಿಂದ ಸಂಜೆ 5 ಗಂಟೆಯ ಅವಧಿಯಲ್ಲಿ ತಡೋಳಾ ಗ್ರಾಮದ ಸೀಮಾಂತರದ ಖಜೂರಿ ಬಾರ್ಡರ್‍ನಿಂದ ತಡೋಳಾ ಕಡೆಗೆ ತೆರಳುವ ಮಾರ್ಗದಲ್ಲಿರುವ ಆಳಂಗಾ ಕ್ರಾಸ್ ಬಳಿಯ ರೋಡ್ ಬ್ರಿಡ್ಜ್ ಸಮೀಪ ಐವರು ಮಾರಕಾಸ್ತ್ರಗಳೊಂದಿಗೆ ದರೋಡೆಗೆ ಹೊಂಚು ಹಾಕಿದ್ದಾರೆ ಎಂಬ ಖಚಿತ ಮಾಹಿತಿ ಪೆÇಲೀಸರಿಗೆ ಲಭಿಸಿತ್ತು. ತಕ್ಷಣ ಪಿಎಸ್‍ಐ ಚಂದ್ರಕಾಂತ್ ನೇತೃತ್ವದ ಪೆÇಲೀಸ್ ತಂಡ ಸ್ಥಳಕ್ಕೆ ಧಾವಿಸಿತು.
ಈ ವೇಳೆ ವಿಶ್ವನಾಥ್ ಪಾಟೀಲ್, ವಿಠ್ಠಲ ಮಾನೆ, ಸುಭಾಷ ಕಲಶೆಟ್ಟಿ ಸೇರಿದಂತೆ 10ರಿಂದ 15 ಮಂದಿ ಗ್ರಾಮಸ್ಥರು ದುಷ್ಕರ್ಮಿಗಳನ್ನು ಹಿಡಿಯಲು ಮುಂದಾದರು. ಪೆÇಲೀಸರು ಹಾಗೂ ಗ್ರಾಮಸ್ಥರು ಸುತ್ತುವರಿಯುತ್ತಿರುವುದನ್ನು ಅರಿತ ಗ್ಯಾಂಗ್‍ನ ಸದಸ್ಯನೊಬ್ಬ ಪಿಸ್ತೂಲ್‍ನಿಂದ ಎರಡು ಸುತ್ತು ಗುಂಡು ಹಾರಿಸಿ ಭೀತಿ ಹುಟ್ಟಿಸಿದ. ಬಳಿಕ ಆರೋಪಿಗಳು ಕಬ್ಬಿನ ಹೊಲ ಹಾಗೂ ತೋಟದ ದಾರಿಯಲ್ಲಿ ಪರಾರಿಯಾಗಲು ಯತ್ನಿಸಿದರು.
ಪೆÇಲೀಸರು ಹಾಗೂ ಗ್ರಾಮಸ್ಥರು ಬೆನ್ನಟ್ಟಿ ದತ್ತಾತ್ರೇಯ ಮುಲಗೆ (25) ಮತ್ತು ಗಣೇಶ್ ಬಿರಾದಾರ್ (22) ಎಂಬುವರನ್ನು ವಶಕ್ಕೆ ಪಡೆದರು. ಬಂಧಿತರಿಂದ ಸುಮಾರು ಮೂರು ಅಡಿ ಉದ್ದದ ಕಬ್ಬಿಣದ ತಲವಾರ, ಮೊಬೈಲ್, ಮುಖಕ್ಕೆ ಕಟ್ಟಿಕೊಳ್ಳುವ ದಸ್ತ ಹಾಗೂ ಖಾರದ ಪುಡಿಯನ್ನು ಜಪ್ತಿ ಮಾಡಲಾಗಿದೆ.
ಮೂವರಿಗಾಗಿ ಶೋಧ ಕಾರ್ಯ
ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜು ಅಲಿಯಾಸ್ ಸಂಜಯ್ ಸಿಂಗ್, ಕಾರ್ತಿಕ್ ಕಲ್ಲಪ್ಪ ಬೋಕಳೆ ಹಾಗೂ ದತ್ತು ವೆಂಕಟ್ ಜಮಾದಾರ್ ಎಂಬುವರಿಗಾಗಿ ಪೆÇಲೀಸರು ಶೋಧ ಮುಂದುವರಿಸಿದ್ದಾರೆ. ಇವರ ಪೈಕಿ ಸಂಜು ಪಿಸ್ತೂಲ್‍ನಿಂದ ಗುಂಡು ಹಾರಿಸಿ ಪರಾರಿಯಾಗಿದ್ದಾನೆ ಎಂದು ಪೆÇಲೀಸರು ತಿಳಿಸಿದ್ದಾರೆ. ಈ ಕುರಿತು ಆಳಂದ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ




