ಆರಾಧನಾ ಪಿಯು ಕಾಲೇಜಿನಲ್ಲಿ ರಾಷ್ಟ್ರೀಯ ಏಕತಾದಿನ ಆಚರಣೆ

,ಕಲಬುರ್ಗಿ:- ನ.2: ನಗರದ ಆರಾಧನಾ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಏಕತಾ ದಿನ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಚೇತನ್ ಕುಮಾರ್ ಗಾಂಗಜಿ ಅವರು ವಹಿಸಿಕೊಂಡಿದ್ದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಚೌಕ್ ಪೆÇಲೀಸ್ ಸ್ಟೇಷನ್ ಪಿ ಎಸ್ ಐ ಶಿವಕುಮಾರ್ ಪಾಟೀಲ್ ಅವರು ಮಾತನಾಡಿ ವಲ್ಲಭಭಾಯಿ ಪಟೇಲ್ ಅವರು 1875ರ ಅಕ್ಟೋಬರ್ 31 ರಂದು ಗುಜರಾತ್‍ನ ನಡಿಯಾದ್‍ನಲ್ಲಿ ಜನಿಸಿದರು. ಬಾಲ್ಯದಿಂದಲೇ ಧೈರ್ಯ ಮತ್ತು ಸಾಹಸಿ ಮನೋಭಾವ ಹೊಂದಿದ್ದ ಅವರು, ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡ್‍ಗೆ ತೆರಳಿ ಬ್ಯಾರಿಸ್ಟರ್ (ವಕೀಲ) ಪದವಿ ಪಡೆದರು. ಭಾರತಕ್ಕೆ ಮರಳಿದ ನಂತರ ಯಶಸ್ವಿ ವಕೀಲರಾಗಿ ಸೇವೆ ಸಲ್ಲಿಸಿದರು. ಬ್ರಿಟಿಷರ ಅನ್ಯಾಯದ ತೆರಿಗೆಯ ವಿರುದ್ಧ ರೈತರನ್ನು ಸಂಘಟಿಸಿ ಅವರು ನಡೆಸಿದ ಬಾರ್ಡೋಲಿ ಸತ್ಯಾಗ್ರಹ ಅತ್ಯಂತ ಯಶಸ್ವಿಯಾಯಿತು. ಈ ಹೋರಾಟದ ನಾಯಕತ್ವವನ್ನು ಮೆಚ್ಚಿ, ಅಲ್ಲಿನ ಮಹಿಳೆಯರು ಮತ್ತು ಜನರು ಅವರಿಗೆ ಸರ್ದಾರ್ ಎಂಬ ಬಿರುದನ್ನು ನೀಡಿದರು.

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ, ದೇಶವು 560ಕ್ಕೂ ಹೆಚ್ಚು ಸಂಸ್ಥಾನಗಳಾಗಿ ಹಂಚಿಹೋಗಿತ್ತು. ದೇಶವನ್ನು ಒಂದಾಗಿ ಜೋಡಿಸುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು.ಸ್ವತಂತ್ರ ಭಾರತದ ಮೊದಲ ಉಪಪ್ರಧಾನಿ ಮತ್ತು ಗೃಹಸಚಿವರಾಗಿದ್ದ ಸರ್ದಾರ್ ಪಟೇಲರು ತಮ್ಮ ಚಾಣಕ್ಷತೆ, ದೃಢ ಮನೋಭಾವ ಮತ್ತು ರಾಜತಾಂತ್ರಿಕತೆಯಿಂದ ಎಲ್ಲಾ ಸಂಸ್ಥಾನಗಳನ್ನು ಭಾರತದ ಒಕ್ಕೂಟಕ್ಕೆ ಸೇರ್ಪಡೆಗೊಳಿಸಿದರು. ಜುನಾಗಢ, ಹೈದರಾಬಾದ್ ಮತ್ತು ಕಾಶ್ಮೀರದಂತಹ ಸಂಸ್ಥಾನಗಳನ್ನು ಭಾರತದೊಂದಿಗೆ ವಿಲೀನಗೊಳಿಸುವಲ್ಲಿ ಅವರು ತೋರಿದ ಧೈರ್ಯ ಅಪ್ರತಿಮವಾದದ್ದು.ಹರಿದು ಹಂಚಿಹೋಗಿದ್ದ ಭಾರತವನ್ನು ಒಂದೇ ರಾಷ್ಟ್ರವಾಗಿ ಒಗ್ಗೂಡಿಸಿದ ಕಾರಣಕ್ಕಾಗಿ ಅವರನ್ನು “ಭಾರತದ ಉಕ್ಕಿನ ಮನುಷ್ಯ”ಮತ್ತು “ಭಾರತದ ಬಿಸ್ಮಾರ್ಕ್” ಎಂದು ಕರೆಯಲಾಗುತ್ತದೆ.

ಇಂದಿನ ಭಾರತದ ನಾಗರಿಕ ಸೇವೆಗಳ ಬಲವಾದ ಅಡಿಪಾಯಕ್ಕೆ ಪಟೇಲರೇ ಕಾರಣ. ಅವರು ಸಿವಿಲ್ ಸರ್ವಿಸ್ ಸಿಬ್ಬಂದಿಯನ್ನು ಭಾರತದ ಉಕ್ಕಿನ ಚೌಕಟ್ಟುಎಂದು ಬಣ್ಣಿಸಿದ್ದರು.ಅವರ ಏಕತೆಯ ಸಾಧನೆಯನ್ನು ಸ್ಮರಿಸಲು ಗುಜರಾತ್‍ನ ನರ್ಮದಾ ನದಿಯ ದಂಡೆಯಲ್ಲಿ “ಏಕತೆಯ ಪ್ರತಿಮೆ” ಯನ್ನು ನಿರ್ಮಿಸಲಾಗಿದೆ. ಇದು ಜಗತ್ತಿನ ಅತಿ ಎತ್ತರದ ಪ್ರತಿಮೆಯಾಗಿದೆ (182 ಮೀಟರ್). ಪ್ರತಿನಿತ್ಯ ಅವರ ಜನ್ಮದಿನವನ್ನು ದೇಶಾದ್ಯಂತ ರಾಷ್ಟ್ರೀಯ ಏಕತಾ ದಿನ ಎಂದು ಆಚರಿಸಲಾಗುತ್ತದೆ.

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು1950ರ ಡಿಸೆಂಬರ್ 15 ರಂದು ಇಹಲೋಕ ತ್ಯಜಿಸಿದರು. ದೇಶದ ಏಕತೆ, ಅಖಂಡತೆ ಮತ್ತು ಸಾರ್ವಭೌಮತ್ವಕ್ಕಾಗಿ ಅವರು ನೀಡಿದ ಕೊಡುಗೆ ಅಮೋಘ. ಅವರ ದೇಶಪ್ರೇಮ, ಧೈರ್ಯ ಮತ್ತು ಶಿಸ್ತು ನಮಗೆ ಎಂದಿಗೂ ಸ್ಪೂರ್ತಿದಾಯಕ. ನಾವೆಲ್ಲರೂ ಭಾರತದ ಏಕತೆಯನ್ನು ಎತ್ತಿಹಿಡಿಯಲು ಶ್ರಮಿಸೋಣ ಎಂದು ಹೇಳುತ್ತಾ ವಿದ್ಯಾರ್ಥಿಗಳ ಉದ್ದೇಶಿಸಿ ಮಾತನಾಡಿದರು. ಅದರ ಜೊತೆಗೆ ರಾಷ್ಟ್ರೀಯ ಏಕತಾ ದಿನದ, ಕುರಿತು ವಿದ್ಯಾರ್ಥಿಗಳಿಗೆ ಪ್ರಮಾಣವಚನ ಮಾಡಿಸಿದರು ಅದೇ ರೀತಿ ಗೌರವ ಉಪಸ್ಥಿತರು. ತಾರಾಸಿಂಗ್ ಚೌಹಾಣ್ ಎ ಎಸ್ ಐ. ಚೌಕ ಪೆÇಲೀಸ್, ಸ್ಟೇಷನ್, ಕಲಬುರಗಿ. ಕಾಶಿನಾಥ್ ಪಾಟೀಲ್ ಉಪನ್ಯಾಸಕರು, ಸ್ವಾಗತ ಕೋರಿದರು. ದೈಹಿಕ ಉಪನ್ಯಾಸಕ ರೇವಣಸಿದ್ದಪ್ಪ ಇವಣಿ ವಂದಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ರೋಹಿಣಿ ಸೂಗೂರ, ಅರ್ಪಿತ ಕೆ ಪಾಟೀಲ, ಶಂಕರ್ ಬಂಡಗರ, ಶಟವಾಜಿ ಜೋಮಿವಾಳೆ , ಅಮರೇಶ್ ಕರಬಸ್ಟಿ , ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಯವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು

 

7k network