ಪೊಲೀಸ್ ಇಲಾಖೆಗೆ ಕರ್ನಾಟಕ ಹೈಕೋರ್ಟ್ ನೀಡಿರುವ 5 ಮಾರ್ಗಸೂಚಿಗಳು ಏನು?

 

ಸಾಮಾಜಿಕ ಜಾಲತಾಣಕ್ಕೆ ಸಂಬಂಧಿಸಿದಂತೆ, ಸುಪ್ರೀಂಕೋರ್ಟಿನ ಸತೇಂದರ್ ಕುಮಾರ್ ಅಂಟಿಲ್ ಮತ್ತು ತೆಲಂಗಾಣ ಹೈಕೋರ್ಟಿನ ಬಾಲು ಪ್ರಕರಣವನ್ನು ಉಲ್ಲೇಖಿಸಿ, ಕರ್ನಾಟಕ ಹೈಕೋರ್ಟ್ ಐದು ಮಾರ್ಗಸೂಚಿಯನ್ನು ಹೊರಡಿಸಿದೆ. ಏನು ಆ ಐದು ಮಾರ್ಗಸೂಚಿಗಳು?

 

1. ಅಪರಾಧದ ಅಂಶಗಳನ್ನು ಕೂಲಂಕುಷವಾಗಿ ಪರಿಶೀಲನೆ : ಆರೋಪ ಎದುರಾದ ಕೂಡಲೇ ಕ್ರಮ ತೆಗೆದುಕೊಳ್ಳದೇ, ಮೊದಲು, ದೂರನ್ನು ಮೇಲ್ನೋಟಕ್ಕೆ ಪರಿಶೀಲಿಸಿ, ಏನು ಆರೋಪ ಮಾಡಲಾಗಿದೆಯೋ, ಆ ಅಪರಾಧದ ಅಂಶಗಳಿವೆಯೇ ಎನ್ನುವುದನ್ನು ಖಚಿತ ಪಡಿಸಿಕೊಳ್ಳಬೇಕು. ಶಿಕ್ಷಾರ್ಹ ಕಾಯಿದೆಯ ನಿಯಮಗಳನ್ನು ನಕಲು ಮಾಡಬೇಡಿ.

 

2. ಸತತ FIRಗಳನ್ನು ಪರಿಶೀಲಿಸಿ : ಒಂದೇ, ಘಟನೆಗೆ ಸಂಬಂಧಿಸಿದಂತೆ, ಈಗಾಗಲೇ ದೂರು ದಾಖಲಾಗಿದ್ದರೆ, ಮತ್ತೊಂದು ಹೊಸ ಎಫ್ಐಆರ್ ದಾಖಲಿಸಬಾರದು. ದೂರುದಾರರು ಬೇರೆಯವರು ಆಗಿದ್ದರೂ, ಮತ್ತೊಂದು FIR ದಾಖಲಿಸಬಾರದು.

 

3. ಮೊದಲು ಪ್ರಾಥಮಿಕ ತನಿಖೆ : ಯಾವುದೇ ಬಂಧನ ಅಥವಾ ಎಫ್ಐಆರ್ ದಾಖಲಿಸುವ ಮುನ್ನ, BNSS 173(3) ಅಡಿಯಲ್ಲಿ, ಅವಕಾಶ ಇರುವ ಕಡೆ, ಪ್ರಾಥಮಿಕ ತನಿಖೆಯನ್ನು ನಡೆಸುವುದಕ್ಕೆ ಆದ್ಯತೆಯನ್ನು ನೀಡಬೇಕು.

 

4. ಕೇವಲ ಟೀಕೆ ಬಂಧನ/ ಎಫ್ಐಆರ್’ಗೆ ಕಾರಣವಾಗಬಾರದು : BNS 353(2) ಅನ್ವಯವಾಗುವಂತೆ, ಪೋಸ್ಟಿನ ನೈಜ ಉದ್ದೇಶ ಸೇರಿದಂತೆ ನಿರ್ದಿಷ್ಟ ಅಂಶಗಳನ್ನು ಪರಿಶೀಲಿಸಬೇಕು. ಕೇವಲ ಟೀಕೆ ಟಿಪ್ಪಣಿಯನ್ನು ಈ ಕಾಯಿದೆಯಡಿಯಲ್ಲಿ ತರಬಾರದು. ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಯಾಗಲಿ.

 

5. ಮೊದಲು ನೋಟಿಸ್ ನೀಡಿ ವಿಚಾರಣೆ ಮಾಡಿ : BNS 35 ಮತ್ತು ಅರ್ನೇಶ್ ಕುಮಾರ್ ತೀರ್ಪನ್ನು ಉಲ್ಲೇಖಿಸಿದ ನ್ಯಾಯಮೂರ್ತಿಗಳು, ಬಂಧನದ ಅಗತ್ಯ ಇಲ್ಲದೇ ಇದ್ದಲ್ಲಿ ಸೆಕ್ಷನ್ 35(3) ನೋಟಿಸ್ ನೀಡಿ ವಿಚಾರಣೆಯನ್ನು ನಡೆಸಬಹುದು. ಎಫ್ಐಆರ್ ದಾಖಲಾದ ಕೂಡಲೇ, ಬಂಧಿಸುವಂತಿಲ್ಲ.

7k network